ಅರೋಮಾಥೆರಪಿ (ಸುಗಂಧ ಚಿಕಿತ್ಸೆ) ಇದು ವ್ಯಕ್ತಿಗಳ ಮನೋಭಾವವನ್ನು, ಅರಿವಳಿಕೆ ಕಾರ್ಯಗಳನ್ನು ಅಥವಾ ಆರೋಗ್ಯವನ್ನು ಪರಿವರ್ತಿಸುವ ಉದ್ಧೇಶದಿಂದ ಸಾರಭೂತ ತೈಲ ಎಂದು ಪರಿಚಿತವಾಗಿರುವ, ಬಹುಬೇಗ ಬದಲಾಗಬಹುದಾದ ಸಸ್ಯ ಸಂಪನ್ಮೂಲಗಳನ್ನು ಮತ್ತು ಇತರ ಸುಗಂಧ ಪೂರಿತ ಮಿಶ್ರಣಗಳಗಳನ್ನು ಬಳಸಿಕೊಳ್ಳುವ ಬದಲಿ ವೈದ್ಯಶಾಸ್ತ್ರದ ಒಂದು ವಿಧಾನವಾಗಿದೆ. ಅರೋಮಾಥೆರಪಿಯ ಪರಿಣಾಮಕಾರಕತೆಯನ್ನು ಇನ್ನೂ ವೈಜ್ಞಾನಿಕವಾಗಿ ಸಾಭೀತುಪಡಿಸಬೇಕಾಗಿದೆ, ಆದಾಗ್ಯೂ ಉಪಸ್ಥಿತವಿರುವ ಕೆಲವು ಸಾಕ್ಷ್ಯಾಧಾರಗಳು ಚಿಕಿತ್ಸೆಗೆ ಸಂಬಂಧಿಸಿದಂತೆ ಸಾರಭೂತ ತೈಲಗಳು ಸೂಕ್ತವಾದವುಗಳು ಎಂದು ಸೂಚಿಸಿವೆ. ಹಾಗಾಗಿ ಟೀ ಗಿಡಗಳಂತಹ ಕೆಲವು ಅವಶ್ಯಕ ತೈಲಗಳು ಸೂಕ್ಷ್ಮ ಜೀವಿ-ವಿರೋಧಿ ಪರಿಣಾಮಗಳನ್ನು ಪ್ರದರ್ಶಿಸಿದವು, ಮತ್ತು ಅವು ಸಾಂಕ್ರಾಮಿಕ ರೋಗಗಳ ಚಿಕೆತ್ಸೆಯಲ್ಲಿ ಕೂಡ ಬಹಳ ಉಪಯುಕ್ತವಾದವುಗಳು ಎಂದು ಸೂಚಿಸಲಾಗಿತ್ತು. ಸುಗಂಧ ಚಿಕಿತ್ಸೆಯ ಫಲದಾಯಕತೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು, ಇದನ್ನು ನಿರ್ಧಿಷ್ಟ ನ್ಯೂನ ವಿಧಾನಶಾಸ್ತ್ರೀಯವಾದ ಜಾಗರೂಕ ಕೂಲಂಕಷವಾದ ಅಧ್ಯಯನಗಳಲ್ಲಿ ವೈಧ್ಯಕಿಯ ಪರಿಸ್ಥಿತಿಗಳು ಕುಂಟಿತಗೊಂಡ ಸಮಯದಲ್ಲಿ ಚಿಕಿತೆಗಾಗಿ ಬಳಸಿಕೊಳ್ಳುತ್ತಿದ್ದರು ಎಂದು ಸೂಚಿಸುತ್ತದೆ. == ಇತಿಹಾಸ == ಸುಗಂಧ ಚಿಕಿತ್ಸೆಯು ಒಣಗಿದ ಸಸ್ಯ ಮೂಲಗಳನ್ನು ಕೊಬ್ಬು ಮಿಶ್ರಿತ ತೈಲದಲ್ಲಿ ನೆನೆಹಾಕಿ ಮಿದುಗೊಳಿಸಿ, ಬೇಯಿಸಿ ಮತ್ತು ನಂತರದಲ್ಲಿ ಅದನ್ನು ಶೋಧಿಸಿ ಕಷಾಯ ಮಾಡಿದ ಸುಗಂಧ ಪೂರಿತ ತೈಲಗಳ ಬಳಕೆಯೊಂದಿಗೆ ಪ್ರಾಚೀನ ಮೂಲಗಳನ್ನು ಹೊಂದಿರಬಹುದು. ಈ ರೀತಿಯ ಹಲವು ತೈಲಗಳು, ರೋಗನಿವಾರಣಾ ಉಪಕರಣಗಳ ಸಮಯದ ಮೇಲಿನ ನಂಬಿಕೆಯೊಂದಿಗೆ ಮೊದಲನೇ ಶತಮಾನದಲ್ಲಿ ಬರೆಯಲಾದ ಡೆ ಮಟಿರಿಯಾ ಮೆಡಿಕಾ ಎಂಬ ಪುಸ್ತಕದಲ್ಲಿ ಡಿಯೋಸ್ಕೊರೈಡ್ಸ್‌ನಿಂದ ವಿವರಿಸಲ್ಪಟ್ಟಿವೆ. ಯಾವಾಗ ಅವಿಸೆನ್ನಾ ಹಬೆ ಸಾಂದ್ರೀಕರಣವನ್ನು ಬಳಸಿಕೊಂಡು ಸಾರಭೂತ ತೈಲಗಳನ್ನು ಪ್ರತ್ಯೇಕಿಸಿದನೋ ಅಲ್ಲಿಯವರೆಗೆ ಹನ್ನೊಂದನೇಯ ಶತಮಾನದಲ್ಲಿ ಸಾಂದ್ರೀಕರಣದ ಸಂಶೋಧನೆಯಾಗುವ ವರೆಗೂ ಸಾಂದ್ರೀಕರಿಸಿದ ಸಾರಭೂತ ತೈಲಗಳು ವೈಧ್ಯ ಪದ್ದತಿಯ ಔಷದಗಳಾಗಿದ್ದವು. ಯೂರೋಪಿನ ಚಿಕ್ಕ ಸಂಖ್ಯೆಯ ವಿಜ್ಞಾನಿಗಳು ಮತ್ತು ವೈದ್ಯರುಗಳಿಂದ ಸರಿ ಸುಮಾರು 1907ರ ಸಮಯದಲ್ಲಿ ಸುಗಂಧ ಚಿಕಿತ್ಸೆಯ ಕಲ್ಪನೆಯು ಮೊಟ್ಟ ಮೊದಲ ಬಾರಿಗೆ ಚರ್ಚೆಗೊಳಪಟ್ಟಿತು. 1937ರಲ್ಲಿ ಈ ಪದವು ಮೊದಲು ಗೋಚರಿಸಿದ್ದು ರಸಾಯನ ಶಾಸ್ತ್ರಜ್ಞನಾದ ರೆನಿ-ಮೌರಿಸ್ ಗ್ಯಾಟ್‌ಪೋಸ್‌ನ ಫ್ರೆಂಚ್ ಪುಸ್ತಕದ ವಿಷಯವಾದ "ಆರೋಮಾಥೆರಪಿ: ಲೆಸ್ ಹ್ಯೂಲ್ಸ್ ಎಸೆನ್‌‍ಶಿಯಲ್ಸ್, ಹಾರ್ಮೋನ್ಸ್ ವೆಜಿಟೇಲ್ಸ್ " ನಲ್ಲಿ ಇದರ ಇಂಗ್ಲೀಷ್ ಆವೃತ್ತಿಯನ್ನು 1993ರಲ್ಲಿ ಪ್ರಕಟಿಸಲಾಯಿತು. ರಲ್ಲಿ ನಡೆದ ಪ್ರಯೋಗಾಲಯದ ಒಂದು ಸ್ಪೋಟದಲ್ಲಿ ಗ್ಯಾಟ್‌ಪೋಸ್ ತನ್ನ ಕೈಯನ್ನು ಬಹು ಗಂಬೀರವಾಗಿ ಸುಟ್ಟುಕೊಂಡನು. ಉದ್ದೇಶಪೂರ್ವಕವಾಗಿ ಮತ್ತು ಪರಿಣಾಮಕಾರಿಯಾಗಿ ಲ್ಯಾವೆಂಡರ್ ತೈಲದಿಂದ ಚಿಕಿತ್ಸೆಗೊಳಪಡಿಸಿದ್ದ ಆ ಸುಟ್ಟ ಕೈ ಆತನಿಗೆ ಗ್ಯಾಸ್ ಗ್ಯಾಂಗ್ರೀನ್ ಎಂಬ ಕಾಯಿಲೆಯನ್ನು ಪರಿಚಯಿಸಿತು. ಜೀನ್ ವಾಲ್‌ನೆಟ್ ಎಂಬ ಒಬ್ಬ ಫ್ರೆಂಚ್ ಸುಶ್ರೂಷಕ ಸಾರಭೂತ ತೈಲಗಳ ವೈದ್ಯಕೀಯ ಉಪಯೋಗವನ್ನು ಕಂಡುಹಿಡಿದನು, ಅದನ್ನು ಅವನು IIನೇ ಮಹಾಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆಯನ್ನು ನೀಡಲು ರೋಗ ನಿರೋಧಕಗಳಾಗಿ ಬಳಸಿಕೊಂಡನು. == ಲೇಪನದ ಕ್ರಮಗಳು == ರೋಮಾಥೆರಪಿಯ ಲೇಪನದ ಕ್ರಮಗಳು ಈ ಕೆಳಗಿನಂತಿವೆ: ಗಾಳಿಯಲ್ಲಿ ಪ್ರಸರಣ : ನೈಸರ್ಗಿಕ ಸುವಾಸನೆ ಅಥವಾ ನೈಸರ್ಗಿಕ ಸೋಂಕು ನಿವಾರಣೆಗಾಗಿ. ನೇರ ಉಸಿರೆಳೆದುಕೊಳ್ಳುವಿಕೆ : ಉಸಿರಾಟದ ಸೋಂಕು ನಿವಾರಣೆಗಾಗಿ, ರಕ್ತಸಂಚಾರದ ತೊಂದರೆ ನಿವಾರಣೆ, ಉಗುಳುವುದು ಮತ್ತು ಜೊತೆಗೆ ಮಾನಸಿಕ ಪರಿಣಾಮಗಳಿಗಾಗಿ. ಮೇಲ್ಮೈ ಲೇಪನ : ಸಾಮಾನ್ಯ ಮಾಲೀಸು ಮಾಡುವಿಕೆ, ಸ್ನಾನ, ಸಂಕುಚಿತ ಸ್ಥಿತಿಯಲ್ಲಿ, ಚರ್ಮ ರಕ್ಷಣಾ ಚಿಕಿತ್ಸೆ ಮುಂತಾದವುಗಳಲ್ಲಿ. == ಉಪಕರಣಗಳು == ಒಳಗೊಂಡಿರುವ ಕೆಲವು ಉಪಕರಣಗಳು ಈ ಕೆಳಗಿನಂತಿವೆ: ಸಾರಭೂತ ತೈಲಗಳು : ಹಬೆ ಸಾಂದ್ರೀಕರಣದಿಂದ (ಉದಾಹರಣೆಗೆ. ನೀಲಗಿರಿ ತೈಲ) ಅಥವಾ ಒತ್ತಡದಿಂದ (ದ್ರಾಕ್ಷಿ ಹಣ್ಣಿನ ತೈಲ) ಸಸ್ಯಗಳಿಂದ ಸುಲಭವಾಗಿ ಸಾರ ತೆಗೆಯಲಾದ ಪರಿಮಳಯುಕ್ತ ತೈಲಗಳು. ಆದಾಗ್ಯೂ, ಈ ಪದವನ್ನು ಸಾಂದರ್ಬಿಕವಾಗಿ ಯಾವುದೇ ದ್ರಾವಕ ಸಾಂದ್ರೀಕರಣದ ಮೂಲಕ ಸಸ್ಯ ಪರಿಕರಗಳಿಂದ ಸಾರ ತೆಗೆಯಲಾದ ಪರಿಮಳಯುಕ್ತ ತೈಲವನ್ನು ವಿವರಿಸಲು ಬಳಸಿಕೊಳ್ಳಲಾಗುತ್ತದೆ. ಅಬ್ಸೊಲ್ಯೂಟ್ಸ್ : ಮೂಲತವಾಗಿ ದ್ರಾವಕ ಅಥವಾ ವಿಶೇಷ ಸೂಕ್ಷ್ಮ ಪ್ರವಾಹಕದ ಮೂಲಕ ಹೂವುಗಳಿಂದ ಅಥವಾ ಸೂಕ್ಷ್ಮ ಸಸ್ಯಗಳ ಅಂಗಾಶಗಳಿಂದ ಹೊರ ತೆಗೆಯಲಾದ ಪರಿಮಳಯುಕ್ತ ತೈಲಗಳು (ಉ.ದಾ. ರೋಸ್ ಅಬ್ಸೊಲ್ಯೂಟ್ಸ್). ಈ ಪದವನ್ನು ಎಥನಾಲ್ ಬಳಸಿಕೊಂಡು ಪರಿಮಳಯುಕ್ತ ಬೆಣ್ಣೆಯಿಂದ, ಜಲ್ಲಿಯಿಂದ ಮತ್ತು ಕೇಶಾಂಜನದಿಂದ ಬಟ್ಟಿಇಳಿಸಲಾದ ತೈಲವನ್ನು ವಿವರಿಸಲು ಕೂಡ ಬಳಸಿಕೊಳ್ಳಲಾಗುತ್ತದೆ. ಫಿಟೋನ್‌ಸೈಡ್ಸ್‌‌ಗಳು : ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ ಮತ್ತು ಬಹುಬೇಗ ಕರಗಬಹುದಾದ ವಿವಿಧ ಜೈವಿಕ ಮಿಶ್ರಣಗಳು. ಹಲವು ಟರ್ಪೇನ್-ಮೂಲದ ಅಲ್ಲಿಯಮ್ ಜಾತಿಯ ಗಿಡದ ಪರಿಮಳಯುಕ್ತ ತೈಲಗಳು ಮತ್ತು ಸಲ್ಫರ‍್‌ಯುಕ್ತ ಸಂಯೋಜಕಗಳು ಫಿಟೋನ್‌ಸೈಡ್‌ಗಳಾಗಿವೆ, ಹಾಗಾಗಿ ನಂತರದವುಗಳನ್ನು ಅವುಗಳ ಒಪ್ಪಿಕೊಳ್ಳಲಾಗದ ಸುವಾಸನೆಯಿಂದಾಗಿ ಸುಗಂಧ ಚಿಕಿತ್ಸೆಯಲ್ಲಿ ಅತೀ ಕಡಿಮೆ ಬಳಸಿಕೊಳ್ಳಲಾಗಿದೆ ಮೂಲಿಕೆಗಳ ಡಿಸ್ಟಿಲ್ಲೇಟ್‌ಗಳು ಅಥವಾ ಹೈಡ್ರೋಸೋಲ್‌ಗಳು: ಭಟ್ಟಿ ಇಳಿಸುವಿಕೆ ಪ್ರಕ್ರಿಯೆಯ ಜಲಜನ್ಯ ಉಪೋತ್ಪನ್ನಗಳು (ಉದಾ: ಗುಲಾಬಿಜಲ). ಅನೇಕ ಮೂಲಿಕೆಗಳಿಂದ ಡಿಸ್ಟೀಲ್ಲಟ್‌ಗಳನ್ನು ಭಟ್ಟಿ ಇಳಿಸಬಹುದಾಗಿದ್ದು ಅವುಗಳನ್ನು ಅಡಿಗೆಯಲ್ಲಿ, ಔಷಧಿ ಮತ್ತು ಚರ್ಮರಕ್ಷಣೆಯಲ್ಲಿ ಬಳಸಬಹುದಾಗಿದೆ. ಸಾಮಾನ್ಯ ಮೂಲಿಕೆ ಡಿಸ್ಟಿಲ್ಲೇಟ್‌ಗಳೆಂದರೆ ಗುಲಾಬಿ, ನಿಂಬೆ ಮುಲಾಮು ಮತ್ತು ಕ್ಯಮೊಮೈಲ್. ಇನ್‌ಫ್ಯೂಶನ್‌ಗಳು : ಅನೇಕ ಜಲಸಸ್ಯಗಳಿಂದ ತೆಗೆದ ವಸ್ತು (ಉದಾಹರಣೆಗೆ ಕ್ಯಮೋಮೈಲ್‌ನ ಇನ್‌ಫ್ಯೂಶನ್) ಕ್ಯಾರಿಯರ್ ತೈಲಗಳು : ಚರ್ಮದ ಆರೈಕೆಗಾಗಿ ಬಳಸುವ ಸಾರಭೂತ ತೈಲಗಳನ್ನು ತೆಳುವಾಗಿಸುವ ಹೆಚ್ಚು ತೈಲಯುಕ್ತವಾದ ಸಸ್ಯ ಮೂಲದ ಟ್ರೈಅಸೈಲ್‌ಗ್ಲೈಸೆರೈಡ್‌ಗಳು (ಉದಾ: ಸಿಹಿ ಆಲ್ಮಂಡ್ ತೈಲ) ಭಾಷ್ಪೀಕಾರಕ (ಭಾಷ್ಪಗೊಳ್ಳುವಂತೆ ಮಾಡಿದ) ಕಚ್ಚಾ ಮೂಲಿಕೆಗಳು : ವಿಶೇಷ ಹೆಚ್ಚಿನ ತೈಲಾಂಶವಿರುವ ಸಸ್ಯಾಧಾರಿತ ವಸ್ತುಗಳು ಒಣಗಿಸಿ, ಕುಟ್ಟಿ ಬಿಸಿ ಮಾಡಿ ಬೇರ್ಪಡಿಸಿ ನಂತರ ಅದರ ಸುಗಂಧವನ್ನು ನೇರವಾಗಿ ಉಸಿರಾಡುವಂತೆ ಮಾಡುವುದು. == ಸಿದ್ಧಾಂತ == ಸುಗಂಧ ಚಿಕಿತ್ಸೆ ಇದು ಸಾರಭೂತ ತೈಲಗಳ ಮೂಲಕ ರೋಗಗಳನ್ನು ನಿಯಂತ್ರಿಸುವ ಅಥವಾ ಚಿಕಿತ್ಸಿಸುವ ಪದ್ದತಿ. ಪರಿಣಾಮಗಳ ಅಭಿಪ್ರಾಯವನ್ನು ವಿವರಿಸಲು ಎರಡು ಮೂಲಭೂತ ಯಾಂತ್ರಿಕ ರಚನೆಗಳನ್ನು ಮಂಡಿಸಲಾಯಿತು. ಮೊದಲನೆಯದು ಘ್ರಾಣ ಸಂಬಂಧಿ ವ್ಯವಸ್ತೆಯ ಮೂಲಕ ಮೆದುಳಿನ, ಪ್ರಮುಖವಾಗಿ ಅಂಗ ವ್ಯವಸ್ತೆಯ ಮೇಲೆ ಅರೋಮಾದ ಪ್ರಭಾವ. ಎರಡನೆಯದು ಔಷಧ ವಿಜ್ಞಾನದ ಮೇಲೆ ಸಾರಭೂತ ತೈಲದ ನೇರ. ಪರಿಣಾಮ ಎಲ್ಲಿಯವರೆಗೆ ದೇಹ ಮತ್ತು ಅರೋಮೆಟಿಕ್ ತೈಲಗಳ ನಡುವಿನ ಒಡಂಬಡಿಕೆಯ ಖಚಿತವಾದ ಜ್ಞಾನವು ಅರೋಮಾ ಚಿಕಿತ್ಸಕರ ಮೂಲಕ ಪದೇ ಪದೇ ಕೇಳಲ್ಪಡುವುದೋ ಅಲ್ಲಿಯವರೆಗೆ ಸುಗಂಧ ಚಿಕಿತ್ಸೆಯ ಫಲದಾಯಕತೆ ಸಾಭೀತಾಗುವುದಿಲ್ಲ. ಆದರೂ, ಇತರ ತಾಂತ್ರಿಕತೆಯ ಜೊತೆಗಿನ ಸುಗಂಧ ಚಿಕಿತ್ಸೆಯ ಕೆಲವು ಪ್ರಾಥಮಿಕ ಚಿಕಿತ್ಸಕ ಅಧ್ಯಯನಗಳು ಗುಣಾತ್ಮಕ ಪರಿಣಾಮವನ್ನು ತೋರಿವೆ. ಇಂದಿನ ಇಂಗ್ಲೀಷ್-ಮಾತನಾಡುವ ಜಗತ್ತಿನಲ್ಲಿ, ವೃತ್ತಿಗಾರರು ಮಸಾಜಿನಲ್ಲಿ ಸಾರಭೂತ ತೈಲದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಅಗತ್ಯವಾದುದನ್ನು ಪೂರೈಸುವ ಮಾದರಿಯಲ್ಲಿ ಅತ್ಯಂತ ಉತ್ತಮವಾಗಿದೆ ಮತ್ತು ಅವೈಜ್ಞಾನಿಕ ವಂಚನೆಯಲ್ಲಿ ತುಂಬಾ ಕೆಟ್ಟದ್ದಾಗಿದೆ ಎಂದು ಸುಗಂಧ ಚಿಕಿತ್ಸೆಯು ಹೇಳಲ್ಪಡುತ್ತದೆ. == ಆಯ್ಕೆ ಮತ್ತು ಕೊಳ್ಳುವಿಕೆ == ಘಟಕಗಳ (ಆಹಾರ ರಾಸಾಯನಿಕಗಳ ಸೂಚಕವಾದ ಸಎಫ್.ಸಿ.ಸಿ ಎಂದು ಸೂಚಿಸಿದ ಘಟಕಗಳು) ಉತ್ತಮ ದರ್ಜೆಯ ಪ್ರಮಾಣವನ್ನು ಹೊಂದಿರುವ ತೈಲವು ಸಾಮಾನ್ಯವಾಗಿ ತೈಲದಲ್ಲಿ ಇರಲೇಬೇಕಾದ ನಿರ್ಧಿಷ್ಟವಾದ ಪ್ರಮಾಣದ ಅರೋಮಾ ರಾಸಾಯನಿಕಗಳನ್ನು ಹೊಂದಿರಬೇಕು. ಆದರೆ ಆ ತೈಲಕ್ಕಾಗಿ ಎಫ್.ಸಿ.ಸಿ ನಿಂದ ಪ್ರಾರಂಭಿಸಿದ ಮಾನದಂಡಗಳನ್ನು ಮುಟ್ಟುವ ನಿಟ್ಟಿನಲ್ಲಿ ರಾಸಾಯನಿಕಗಳನ್ನು ಸಮ್ಮಿಶ್ರ ರೂಪದಲ್ಲಿ ಸೇರಿಸಬಾರದು ಎಂಬುದಕ್ಕೆ ಯಾವುದೇ ನಿಯಮಗಳಿರಲಿಲ್ಲ. ಉದಾಹರಣೆಗೆ, ಎಫ್‌.ಸಿ.ಸಿಯ ಪರಿವಿಡಿಯನ್ನು ಸರಿಗಟ್ಟುವ ನಿಟ್ಟಿನಲ್ಲಿ ಲೆಮೊನ್‌ಗ್ರಾಸ್‌ ಸಾರಭೂತ ತೈಲವು ಪ್ರತಿಶತ 75ರಷ್ಟು ಅಲ್ಡಿಹೈಡ್ ಅನ್ನು ಆ ತೈಲದಲ್ಲಿ ಹೊಂದಿರಬೇಕಿತ್ತು, ಆದರೆ ಆ ಅಲ್ಡಿಹೈಡ್ ಲೆಮೊನ್‌ಗ್ರಾಸ್‌‌ನಿಂದ ಬರುವುದಕ್ಕೂ ಬದಲಾಗಿ ರಾಸಾಯನಿಕ ಶುದ್ಧೀಕರಣದಿಂದ ಬರಬಹುದಿತ್ತು. ಎಫ್‌.ಸಿ.ಸಿ ತೈಲಗಳೆಲ್ಲವೂ "ಆಹಾರ ಗುಣಮಟ್ಟದವುಗಳು" ಎಂದು ಹೇಳಬೇಕಾದರೆ ಅವುಗಳು ತೀರಾ ಅಗತ್ಯವಾಗಿ ಬೇಡವಾದ ಸಂದರ್ಭದಲ್ಲಿ ಅವುಗಳನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡಬೇಕಾಗುತ್ತದೆ. ಸುಗಂಧ ಚಿಕಿತ್ಸೆಗೆ ಅತ್ಯಂತ ಸೂಕ್ತವಾದ ಸಾರಗುಂದದ ಸಾರಭೂತ ತೈಲಗಳು ಚಿಕಿತ್ಸಕ ದರ್ಜೆ ಗಳಾಗಿ ಹೆಸರಿಸಲ್ಪಟ್ಟಿವೆ, ಆದರೆ ಕೈಗಾರಿಕೆಗಳ ಮೇಲೆ ನಿಯಂತ್ರಣವಿಲ್ಲದ ರಾಷ್ಟ್ರಗಳಲ್ಲಿ ಚಿಕಿತ್ಸಕ ದರ್ಜೆಗಳು ಕೈಗಾರಿಕೆಗಳ ಬಹುಮತಾಭಿಪ್ರಾಯಗಳ ಮೇಲೆ ನಿರ್ಧರಿತವಾಗುತ್ತದೆ ಮತ್ತು ಇದು ನಿಯಂತ್ರಿತ ವಿಭಾಗಕ್ಕೆ ಸೇರಿರುವುದಿಲ್ಲ. ಕೆಲವು ಅರೋಮಾ ಚಿಕಿತ್ಸಕರು ಅವರು ಬಳಸುವ ತೈಲದ ಮೂಲ ಮತ್ತು ಅದರ ಪ್ರಮಾಣಗಳಿಗೆ ಸಂಬಂಧಿಸಿದಂತೆ ತಪ್ಪುದಾರಿಯ ಹಕ್ಕು ಸಾಧಿಸಲು ಈ ಸನ್ನಿವೇಶದ ಲಾಭವನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯಲ್ಲಿ, ತೈಲಗಳ ನಿರ್ಮಲತ್ವದ ಮೇಲಿರುವ ಹಕ್ಕುದಾರಿಕೆಯು ಸೀಮಿತ ಮೌಲ್ಯವನ್ನು ಹೊಂದಿದ್ದ ಮಾಸ್‌ ಸ್ಪೆಕ್ಟ್ರಾಮೆಟ್ರಿ ಅಥವಾ ಗ್ಯಾಸ್‌ ಕ್ರೊಮೊಟೊಗ್ರಫಿ ಇಂದಾಗಿ ತಿಳಿಯಾಯಿತು, ಅಂದಿನಿಂದ ತೈಲದ ಮೂಲಕ ಗಳಿಸಬಹುದಾದ ಹಲವಾರು ರಾಸಾಯಕನಿಕ ಗಳನ್ನು ಪ್ರದರ್ಶಿಸಲು ಈ ರೀತಿಯ ಪ್ರಯೋಗಗಳನ್ನು ಮಾಡಬಹುದಾಗಿತ್ತು. ಸಾರಭೂತ ತೈಲದಲ್ಲಿ ನೈಸರ್ಗಿಕವಾಗಿಯೇ ಸಂಬವಿಸುವ ಹಲವಾರು ರಾಸಾಯನಿಕಗಳು ಸುಗಂಧ ದೃವ್ಯ ಕೈಗಾರಿಕೆಯಲ್ಲಿ ತಯಾರಿಸಲ್ಪಡುತ್ತವೆ ಮತ್ತು ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂವ್ಬ ಕಾರಣಕ್ಕೆ ಸಾರಭೂತ ತೈಲಗಳ ಕಲಬೆರಕೆಯನ್ನು ಮಾಡಲಾಗುತ್ತದೆ ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕಗಳು ಮತ್ತು ಕೃತಕ ಮಿಶ್ರಣದ ನಡುವಿನ ವಿಭಜಿನೆಗೆ ಸಂಬಂಧಿಸಿದಂತೆ ಯಾವುದೇ ಮಾರ್ಗಗಳಿಲ್ಲ. ಸಾರಭೂತ ತೈಲವು ಕಲಬೆರಕೆಯಾಗಿದೆಯೇ ಎಂಬುದನ್ನ ನಿರ್ಧರಿಸುವ ಪ್ರಮುಖ ಸಾಧನವೆಂದರೆ ಶಿಕ್ಷಿತ ರಹಸ್ಯ ವರದಿಗಾರಿಕೆ. ಹಲವಾರು ಜನರು ಕೂಡ ನೈಸರ್ಗಿಕ ಮತ್ತು ಮಿಶ್ರಿತ ಸುಗಂಧವನ್ನು ಪತ್ತೆ ಹಚ್ಚಬಹುದು, ಆದರೆ ಇದಕ್ಕೆ ಅನುಭವದ ಅಗತ್ಯವಿದೆ. == ಜನಪ್ರಿಯ ಉಪಯೋಗಗಳು == ನಿಂಬೆ ತೈಲವು ಸುಧಾರಿತ ಮತ್ತು ಒತ್ತಡ-ನಿವಾರಕ/ಖಿನ್ನತೆಯ-ನಿವಾರಕವಾಗಿದೆ. ಜಪಾನಿಯರ ಅಧ್ಯಯನದ ಪ್ರಕಾರ ದ್ರವ ರೂಪದಲ್ಲಿರುವ ನಿಂಬೆ ಸಾರಭೂತ ತೈಲವು ಇಲಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡಿರುವ ಪ್ರಯೋಗವನ್ನು ತಿಳಿಸುತ್ತದೆ. ಒಹಿಯೋ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧನೆಯು ನಿಂಬೆ ತೈಲವು ಅರೋಮಾದಿಂದಾಗುವ ಒಬ್ಬ ಮನುಷ್ಯನ ಭಾವನೆಗಳನ್ನು ಹೆಚ್ಚಿಸಲು ಮತ್ತು ನೆಮ್ಮದಿಯನ್ನು ಪಡೆಯಲು ಸಹಕರಿಸುತ್ತದೆ ಎಂದು ಸೂಚಿಸುತ್ತದೆ. ಥೈಮ್ ತೈಲ == ಫಲದಾಯಕತೆ == ಸುಗಂಧ ಚಿಕಿತ್ಸೆಗೆ ಸೇರಿಸಬಹುದಾದ ಕೆಲವು ಉಪಯೋಗಗಳೆಂದರೆ ಯಾವುದೇ ನೈಸರ್ಗಿಕ ಮಾನಸಿಕ ಪರಿಣಾಮಗಳಿಲ್ಲದೆ ಪ್ಲೆಸಿಬೋ ಪರಿಣಾಮದಿಂದ ಹುಟ್ಟಬಹುದಾದ ಸಮಾಧಾನತೆ ಮತ್ತು ಮಾನಸಿಕ ಸ್ಪಷ್ಟತೆ. ಹೆಚ್ಚಿನ ವೈಧ್ಯಕೀಯ ವೃತ್ತಿಪರರಲ್ಲಿರುವ ಬಹುಮತ ಅಭಿಪ್ರಾಯವೆಂದರೆ ಕೆಲವು ಅರೋಮಾಗಳು ಮನೋಭಾವನೆ ಮತ್ತು ಮಾನಸಿಕ ನೆಮ್ಮದಿಯ ಮೇಲೆ ಪ್ರದರ್ಶನ ಪರಿಣಾಮಗಳನ್ನು ಹೊಂದಿರುವಾಗ ಮತ್ತು ರೋಗಿಗಳಿಗೆ ಸಂಬಂಧಿತ ಉಪಯೋಗಗಳನ್ನೂ ಕೂಡ ಹೊಂದಿರಬಹುದು, ಆದರೆ ಪ್ರಸ್ತುತವಾಗಿ ಸುಗಂಧ ಚಿಕಿತ್ಸೆಗೆ ಮಾಡಲಾದ ಈ ಹಕ್ಕುಸಾಧನೆಯನ್ನು ಪ್ರೋತ್ಸಾಹಿಸಲು ಅಲ್ಲಿ ಸಮರ್ಪಕವಾದ ಸಾಕ್ಷಿಗಳು ಇರದಿರುವುದು. ಸುಗಂಧ ಚಿಕಿತ್ಸೆಯ ಕಾರಣ ಮತ್ತು ಪರಿಣಾಮಗಳ ಮೇಲಿನ ವಿಜ್ಞಾನಿಕ ಸಂಶೋಧನೆಯು ಸೀಮಿತವಾಗಿದೆ, ಆದಾಗ್ಯೂ ಪ್ರಣಾಳದಲ್ಲಿನ ಪ್ರಯೋಗವು ಕೆಲವು ಸೂಕ್ಷ್ಮಾಣುಜೀವಿ ವಿರೋಧಕ ಮತ್ತು ರೋಗನಿರೋಧಕ ಸೂಕ್ಷ್ಮಾಣುಜೀವಿ ಪರಿಣಾಮಗಳನ್ನು ಬಹಿರಂಗಪಡಿಸಿತು. ಆಹ್ಲಾದಕರ ಪರಿಮಳಯುಕ್ತ ಮಸಾಜಿನ ಸಂತೋಷದ ಹೊರತಾಗಿ ಸುಗಂಧ ಚಿಕಿತ್ಸೆ ಮಸಾಜಿನ ದೀರ್ಘಾವದಿಯ ಪರಿಣಾಮದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಗಂಬೀರ ಬುದ್ಧಿಮಾಂದ್ಯ ಚಿಕಿತ್ಸೆಯ ವೈಧ್ಯಕೀಯ ಮಾನಸಿಕತೆಗೆ ಸಂಬಂಧಿಸಿದ ಎರಡು ಕುರುಡು ಅಧ್ಯಯನಗಳು ಪ್ರಖಟಗೊಂಡವು. ಸಾರಭೂತ ತೈಲಗಳು ಹಲ್ಲಿಗೆ ಸಂಬಂಧಿಸಿದ ಮೌತ್ ವಾಶ್ ಉತ್ಪನ್ನದಲ್ಲಿ ಪ್ರದರ್ಶನ ಪರಿಣಾಮವನ್ನು ಹೊಂದಿದ್ದವು. ಸ್ಕೆಪ್ಟಿಕಲ್ ಸಾಹಿತ್ಯವು ಸೂಚಿಸುವಂತೆ ಸುಗಂಧ ಚಿಕಿತ್ಸೆಯು ರೋಗಗಳನ್ನು ಉಪಶಮನ ಮಾಡುತ್ತದೆ ಎಂಬ ದಾಖಲೆಗೆ ಬದಲಾಗಿ ಅದರ ಉಪಯೋಗಕ್ಕೆ ಸಂಬಂಧಿಸಿದಂತೆ ಅನೆಕ್‌ಡಾಟಲ್ ಪುರಾವೆಯ ಮೇಲೆ ನಿರ್ಧರಿತವಾಗಿದೆ. ವಿಜ್ಞಾನಿಗಳು ಮತ್ತು ವೈದ್ಯಕೀಯ ವೃತ್ತಿಪರರು ಸುಗಂಧ ಚಿಕಿತ್ಸೆಯು ಸೀಮಿತ ವೀಜ್ಞಾನಿಕ ಬೆಂಬಲವನ್ನು ಹೊಂದಿದೆ ಎಂದು ಗುರುತಿಸಿದ್ದಾರೆ, ಆದರೆ ವಿಮರ್ಶೆಗಾರರು ಹಲವಾರು ಸುಗಂಧ ಚಿಕಿತ್ಸೆ ಪ್ರಯೋಗಶೀಲರ ಹಕ್ಕುಸಾಧನೆಯು ದತ್ತಾಂಶಗಳ ಪರಿಧಿಯ ಹೊರಗೆ ಹೋಗಿದೆ ಮತ್ತು ಈ ಎಲ್ಲಾ ಅಧ್ಯಯನಗಳು ಸಂಪೂರ್ಣವಾಗಿ ನಿಯಂತ್ರಿಸಲ್ಪಟ್ಟಿಲ್ಲ ಹಾಗೂ ವಿಮರ್ಶೆಗೆ ಒಳಪಟ್ಟಿಲ್ಲ ಎಂದು ವಾದಿಸಿದ್ದಾರೆ. ಸುಗಂಧ ಚಿಕಿತ್ಸೆಯ ಕೆಲವು ಸಿದ್ಧಾಂತ ಪ್ರತಿಪಾದಕರು ಪ್ರತಿಯೊಂದು ವಿಧದ ತೈಲದ ಹಕ್ಕುಸಾಧನೆಯ ಪರಿಣಾಮವು ಗ್ರಹಣಾ ಶಕ್ತಿಯೊಂದಿಗೆ ಪರಸ್ಪರ ಪ್ರತಿಕ್ರಿಯಿಸುವ ತೈಲದಲ್ಲಿನ ರಾಸಾಯನಿಕದಿಂದ ಆಗಿರುವುದಲ್ಲ ಎಂದು ನಂಬುತ್ತಾರೆ, ಆದರೆ ತೈಲವು ಗಿಡದ ಲೈಪ್ ಫೋರ್ಸ್‌ನ ಸತ್ವವನ್ನು ಹೊಂದಿರುವುದರಿಂದ ಅದು ದೇಹಲ್ಲಿನ ಶಕ್ತಿಯನ್ನು ಸಮತೋಲನ ಮಾಡುತ್ತದೆ ಮತ್ತು ದೇಹದ ಶಕ್ತಿಯ ಮೂಲಗಳಿಂದ ಋಣಾತ್ಮಕ ನಡುಕವನ್ನು ನೀಗಿಸಿ ರೋಗಗಳನ್ನು ಗುಣಪಡಿಸಿ ಉತ್ತಮ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗವನ್ನು ಗಣಪಡಿಸಿದ ಸಾಧನೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ ಎಂದು ವಾದಿಸಲಾಗಿದೆ, ಮತ್ತು ಹಕ್ಕುಸಾಧಿಸಲ್ಪಟ್ಟ ಶಕ್ತಿಗಳು ಮತ್ತು ಪ್ರಸ್ತುತ ಸ್ಕೆಪ್ಟಿಕ್ಸ್‌ಗಳು ಈ ಸುಗಂಧ ಚಿಕಿತ್ಸೆಯನ್ನು ಹುಸಿವಿಜ್ಞಾನ ಅಥವಾ ಕಪಟ ಪಾಂಡಿತ್ಯ ಎಂದು ತಿರಸ್ಕರಿಸಿವೆ. == ಸುರಕ್ಷತೆಗೆ ಸಂಬಂಧಿಸಿದ ವಿಷಯಗಳು == ಇದಕ್ಕೆ ಸಂಬಂಧಿಸಿದಂತೆ ಹಲವಾರು ಹಲವಾರು ಸುರಕ್ಷತಾ ವಿಧಾನಗಳಿವೆ ಏಕೆಂದರೆ ಸಾರಭೂತ ತೈಲಗಳು ಅತೀ ಸಾಂದ್ರವಾಗಿದ್ದು ಅದನ್ನು ಲೇಪಿಸಿಕೊಂಡ ಸಮಯದಲ್ಲಿ ಅವು ಚರ್ಮಕ್ಕೆ ಕಿರಿಕಿರ್ಯನ್ನುಂಟು ಮಾಡಬಹುದು ಮತ್ತು ಅದು ಸಾರಗುಂದಿಸದ ತೈಲವಾಗಿದೆ. ಆದ್ದರಿಂದ, ಅವು ಸಾಮಾನ್ಯವಾಗಿ ಮೇಲ್ಮೈ ಲೇಪನಕ್ಕಾಗಿ ರೋಗವಾಹಕ ತೈಲದಿಂದ ನಿಸ್ಸಾರಗೊಳಿಸಿ ತಯಾರಿಸಲಾದ ತೈಲವಾಗಿವೆ. ಲೆಮನ್ ಅಥವಾ ಲೈಮ್ ನಂತಹ ಸಿಪ್ಪೇ ಸುಲಿದ ನಿಂಬೇ ಜಾತಿಯ ತೈಲಗಳಿಂದ ಫೊಟೋಟಾಕ್ಸಿಕ್ ನಂತಹ ಪ್ರತಿಪರಿಣಾಮಗಳು ಕೂಡ ಸಂಭವಿಸಬಹುದು. ಮತ್ತೂ, ಹಲವು ಸಾರಭೂತ ತೈಲಗಳು ಸೂಕ್ಷ್ಮಗ್ರಾಹಕ ರಾಸಾಯನಿಕಗಳನ್ನು ಹೊಂದಿರುತ್ತವೆ (ಇದರ ಅರ್ಥ, ಈ ತೈಲಗಳ ಹಲವಾರು ಬಾರಿಯ ಲೇಪನವು ನಂತರದಲ್ಲಿ ಚರ್ಮದ ಮೇಲೆ ಮತ್ತು ದೇಹದ ಉಳಿದ ಇತರ ಭಾಗದ ಮೇಲೂ ಪ್ರತಿ ಪರಿಣಾಮವನ್ನು ಬೀರಬಹುದು). ಒಂದು ವೇಳೆ ಮೂಲ ಗಿಡಗಳನ್ನು ಮಾತ್ರ ಕೃಷಿ ಮಾಡಿದ್ದರೆ ಆ ಕೀಟನಾಶಕಗಳಿಂದ ಕೆಲವು ರಾಸಾಯನಿಕ ಅಲರ್ಜಿಗಳು ಕೂಡ ಸಂಭವಿಸಬಹುದು. ಕೆಲವು ತೈಲಗಳು ಪ್ರಮುಖವಾಗಿ ಬೋರಲು ಬೀಳುವ ಬೆಕ್ಕಿನಂತಹ ಕೆಲವು ಸ್ಥಳೀಯ ಪ್ರಾಣಿಗಳಿಗೆ ವಿಷವಾಗಿ ಪರಿಣಮಿಸಬಹುದು. ಎರಡು ಸಾಮಾನ್ಯ ತೈಲಗಳಾದ ಲ್ಯಾವೆಂಡರ್ ಮತ್ತು ಟೀ ಗಿಡ ಗೈನೆಕೊಮಾಸ್ತಿಯಾ ಎಂಬ ಕಾಯಿಲೆಗೆ, ಸ್ಥನ ಅಂಗಾಂಶಗಳ ಅಸ್ವಾಭಾವಿಕ ಬೆಳವಣಿಗೆ ಮತ್ತು ಅಪ್ರಾಪ್ತ ವಯಸ್ಕ ಹುಡುಗರಲ್ಲಿ ಪ್ರ ಪರಿಣಾಮವನ್ನು ಬೀರಬಹುದು, ಆದಾಗ್ಯೂ ಈ ವಿಷಯವು ಕೇವಲ ಮೂರು ಹುಡುಗರ‍ ಪರಿವೀಕ್ಷಣೆಯ ಆಧಾರದ ಮೇಲೆ ರಚಿಸಲಾಗಿದೆ ಎಂದು ವರದಿಯು ತಿಳಿಸಿದೆ (ಮತ್ತು ಇದು ಒಂದು ವಿಜ್ಞಾನಿಕ ಅಧ್ಯಯನವಲ್ಲ), ಮತ್ತು ಆ ಎರಡು ಹುಡುಗರ ತೂಕವು ಅವರ ವಯಸ್ಸಿನ ತೂಕದ ಸರಾಸರಿಗಿಂತ ಹೆಚ್ಚಾಗಿತ್ತು ಹಾಗಾಗಿ ಅವರು ಮೊದಲೆ ಗೈನೆಕೊಮಾಸ್ತಿಯಾಗೆ ಗುರಿಯಾಗಿದ್ದರು. ಕೇಂಬ್ರಿಜ್ ವಿಶ್ವವಿಧ್ಯಾಲಯದ ಮಕ್ಕಳ ಹಾರ್ಮೋನುಗಳ ತಜ್ಞ "...ಈ ತೈಲಗಳು ಈಸ್ಟ್ರೋಜೆನ್‌ಗಳನ್ನು ಅನುಕರಿಸಬಲ್ಲವು" ಮತ್ತು "ಜನರು ಈ ಉತ್ಪನ್ನಗಳನ್ನು ಬಳಸುವಾಗ ಸ್ವಲ್ಪ ಜಾಗರೂಕರಾಗಿರಬೇಕು" ಎಂದು ಹೇಳಿದ್ದಾನೆ. ಹಲವಾರು ಜೈವಿಕ ಚಟುವಟಿಕೆಯ ವಸ್ತುಗಳೊಂದಿಗೆ ಸಾರಭೂತ ತೈಲವು ಸಾಮಾನ್ಯ ಸಾರ್ವಜನಿಕರಿಗೆ ಸುರಕ್ಷಿತವಾಗಿರಬಹುದು ಆದರೆ ಅದು ಗರ್ಬಿಣಿ ಮತ್ತು ಹಾಲುಣಿಸುವ ಮಹಿಳೆಯರ ಮೇಲೆ ಹಾನಿಯುಂಟು ಮಾಡಬಹುದು. ಹಾಗಾಗಿ ಕೆಲವರು ಚಿಕಿತ್ಸಕ ಉದ್ದೇಶಗಳಿಗಾಗಿ ಸಾರಭೂತ ತೈಲದ ಶಾಸನದ ಪರವಾಗಿ ವಾದಿಸುತ್ತಾರೆ, ಆದರೆ ಪರವಾನಿಗೆಯನ್ನು ಪಡೆದ ಸುಗಂಧ ಚಿಕಿತ್ಸೆ ವೃತ್ತಿಪರರು ಸಾರಭೂತ ತೈಲದ ಅತೀ ವಿಷಯುಕ್ತ ಸ್ವಭಾವದಿಂದಾಗಿ ಸ್ವಂತ ಉಪಯೋಗಕ್ಕೆ ಾನುಮತಿಯನ್ನು ನೀಡುವುದಿಲ್ಲ. ಕೆಲವು ಅತಿ ಸಾಮಾನ್ಯವಾದ ನೀಲಗಿರಿಯಂತಹ ತೈಲಗಳು ಆಂತರಿಕವಾಗಿ ಸೇವಿಸಿದಾಗ ಅತ್ಯಂತ ವಿಷಯುಕ್ತವಾಗಿ ಪರಿಣಮಿಸುತ್ತವೆ. ಒಂದು ಚಮಚಕ್ಕಿಂತಲೂ ಕಡಿಮೆ ಇರುವ ಔಷದದ ಅಳತೆಯು ಅರ್ಥಗರ್ಭಿತವಾದ ವೈಧ್ಯಕೀಯ ಸೋಂಕುಗಳಿಗೆ ಕಾರಣವಾಗಿದೆ ಮತ್ತು 4ರಿಂದ 5ಮಿಲಿ. ತೈಲದ ಸೇವನೆಯಿಂದ ಅತೀ ವಿಷಯುಕ್ತವಾದದ್ದು ಕೂಡ ಸಂಭವಿವಬಹುದು ಎಂದು ವರದಿ ಮಾಡಲಾಗಿದೆ. ವಿಷಯುಕ್ತ ಪ್ರತಿಪರಿಣಾಮಗಳ ಕೆಲವು ವರಧಿಯಾದ ಸಂಗತಿಗಳೆಂದರೆ ಸೇಜ್, ಹೈಸೊಪ್, ಥುಜಾ ಮತ್ತು ಸೆಡರ್‌ನಂತಹ ತೈಲಗಳ ಸೇವನೆಯಿಂದಾಗಿ ಉಂಟಾದ ಲಿವರ್ ಹಾನಿ ಮತ್ತು ಸ್ಥಂಬನಗಳು. ಒಂದು ವೇಳೆ ತೈಲಗಳನ್ನು ಮಕ್ಕಳ ಕೈಗೆಟುಕುವ ನೇರಕ್ಕಿಂತ ದೂರದಲ್ಲಿ ಇಡದೇ ಹೋದರೆ ಆಕಸ್ಮಿಕ ಸೇವನೆಗಳು ಕೂಡ ಸಂಭವಿಸಬಹುದು. ಸೇವಿಸಲ್ಪಟ್ಟ ಮತ್ತು ಚರ್ಮಕ್ಕೆ ಲೇಪಿಸಲ್ಪಟ್ಟ ತೈಲಗಳು ಸಾಂಪ್ರದಾಯಿಕ ಔಷದದೊಂದಿಗೆ ಸಂಭಾವ್ಯವಾಗಿ ಋಣಾತ್ಮಕ ಸಂಬಂಧವನ್ನು ಹೊಂದಬಹುದು. ಉದಾಹರಣೆಗೆ, ಮಿಥೈಲ್ ಸ್ಯಾಲಿಸೈಲೇಟ್‌ ನಂತಹ ಅತೀ ಪ್ರಬಲ ತೈಲಗಳಾದ ಸ್ವೀಟ್ ಬಿರ್ಚ್ ಮತ್ತು ವಿಂಟರ್‌ಗ್ರೀನ್ ತೈಲಗಳ ಮೇಲ್ಮೈ ಲೇಪನವು ಆಂಟಿಕಾಫ್‌ಲ್ಯಾಂಟ್ ವಾರ್‌ಫ್ರೇನ್ ಬಳಕೆಯಿಂದ ರಕ್ತಸ್ರಾವಕ್ಕೆ ಕಾರಣವಾಗಬಹುದು. ಕಲಬೆರಕೆ ಮಾಡಿದ ತೈಲಗಳು ಕೂಡ ಅವುಗಳಲ್ಲಿ ಬಳಸಲಾದ ಪದಾರ್ಥಗಳ ಆಧಾರದ ಮೇಲೆ ಹಲವಾರು ಸಮಸ್ಯೆಗಳನ್ನು ತರಬಹುದು. == ಆಕರಗಳು == == ಹೆಚ್ಚಿನ ಓದಿಗಾಗಿ == ಬರ್ಕ್ ಎಲ್. ಮತ್ತು ಚೇಂಬರ್ಸ್ ಪಿ. (1995). ದಿ ವೆರಿ ಎಸೆನ್ಸ್: ಅ ಗೈಡ್ ಟು ಅರೋಮಾಥೆರಪಿ . ಸಿಲ್ವರ್ ಲಿಂಕ್. 60274302 ಲಿಸ್-ಬಾಲ್ಚಿನ್, ಮರಿಯಾ (2006). ಅರೋಮಾಥೆರಪಿ ಸೈನ್ಸ್: ಅ ಗೈಡ್ ಫಾರ್ ಹೆಲ್ತ್ ಕೇರ್ ಪ್ರೊಫೇಶನಲ್ಸ್ . ಲಂಡನ್: ಫಾರ್ಮಾಸಿಉಟಿಕಲ್ ಪ್ರೆಸ್. ಐಎಸ್‌ಬಿಎನ್‌ 0-7922-7391-5. ಶ್ಚಾಬೆಲ್ಟ್, ಕುರ್ಟ್ (1998). ಅಡ್ವಾನ್ಸ್ಡ್ ಅರೋಮಾಥೆರಪಿ: ದಿ ಸೈನ್ಸ್ ಆಪ್ ಎಸೆನ್‌ಶಿಯಲ್ ಆಯಿಲ್ ಥೆರಪಿ . ರೋಚೆಸ್ಟರ್, ವಿಟಿ: ಹೀಲಿಂಗ್ ಆರ್ಟ್ಸ್ ಪ್ರೆಸ್. ಐಎಸ್‌ಬಿಎನ್‌ 0-471-80580-7. ಶ್ಚಾಬೆಲ್ಟ್, ಕುರ್ಟ್ (1999). ಮೆಡಿಕಲ್ ಅರೋಮಾಥೆರಪಿ: ಹೀಲಿಂಗ್ ವಿತ್ ಎಸೆನ್‍ಶಿಯಲ್ ಆಯಿಲ್ . ಬರ್ಕಲೀ, ಸಿಎ: ಪ್ರಾಗ್. ಐಎಸ್‌ಬಿಎನ್‌ 1-59474-023-2 ವಾಲ್‌ನೆಟ್ , ಜೀನ್; ಅಂಡ್ ಟೀಸರಾಂಡ್, ರಾಬರ್ಟ್ (1990). ದಿ ಪ್ರಾಕ್ಟಿಸ್ ಆಪ್ ಅರೋಮಾಥೆರಪಿ: ಅ ಕ್ಲಾಸಿಕ್ ಕಾಂಪೆಡಿಯಮ್ ಆಪ್ ಪ್ಲಾಂಟ್ ಮೆಡಿಸಿನ್ಸ್ ಅಂಡ್ ದೆರ್ ಹೀಲಿಂಗ್ ಪ್ರಾಪರ್ಟಿಸ್ . ರೊಚೆಸ್ಟರ್, ವಿಟಿ: ಹೀಲಿಂಗ್ ಆರ್ಟ್ಸ್ ಪ್ರೆಸ್. ಐಎಸ್‌ಬಿಎನ್‌ 0-521-22515-9. (2003). . ..: . 0309088666. ವ್ಯಾನ್‌ಜೆಕ್, ಕ್ರಿಸ್ಟೋಪರ್ (2003). ಬ್ಯಾಡ್ ಮೆಡಿಸಿನ್: ಮಿಸ್‌ಕನ್ಸೆಪ್‌ಶನ್ ಅಂಡ್ ಮಿಸ್ ಯೂಸಸ್ ರಿವೀಲ್ಡ್, ಪ್ರಾಮ್ ಡಿಸ್ಟನ್ಸ್ ಹೀಲಿಂಘ್ ಟು ವಿಟಾಮಿನ್ . ನ್ಯೂಯಾರ್ಕ್: ಜೆ. ವಿಲೇ. ಐಎಸ್‌ಬಿಎನ್‌ 0-06-095339- ವಾಲ್‌ನೆಟ್, ಜೀನ್; ಆಂಡ್ ಟೀಸರಾಂಡ್, ರಾಬರ್ಟ್ (1982). ದಿ ಪ್ರಾಕ್ಟಿಸ್ ಆಪ್ ಅರೋಮಾಥೆರಪಿ . ಸ್ಯಾಪ್ರನ್ ವಾಲ್ದನ್: ಡ್ಯಾನಿಯಲ್. ಐಎಸ್‌ಬಿಎನ್‌ 0-7922-7391-5. == ಹೊರಗಿನ ಕೊಂಡಿಗಳು == ದಿ ನ್ಯಾಶನಲ್ ಅಸೋಸಿಯೇಶನ್ ಪಾರ್ ಹೋಲಿಸ್ಟಿಕ್ ಅರೋಮಾಥೆರಪಿ ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ಅರೋಮಾಥೆರಪಿ ವಾಟ್ ಡಸ್ ದಿ ರೀಸರ್ಚ್ ಸೇ ಅಬೌಟ್ ಎಸೆನ್‌ಶಿಯಲ್ ಆಯಿಲ್? 2009-02-28 ವೇಬ್ಯಾಕ್ ಮೆಷಿನ್ ನಲ್ಲಿ. ಆಂಟಿವೈರಲ್ ಅಂಡ್ ಆಂಟಿಮೈಕ್ರೊಬಿಯಲ್ ಪ್ರಾಪರ್ಟೀಸ್ ಆಪ್ ಎಸೆನ್‌ಶಿಯಲ್ ಆಯಿಲ್ ದಿ ಅರೋಮಾಥೆರಪಿ ಗ್ಲೋಬಲ್ ಆನ್‌ಲೈನ್ ರೀಸರ್ಚ್ ಆರ್ಚೀವ್ಸ್ ನಿಯತಕಾಲಿಕಗಳು ಇಂಟರ್‌ನ್ಯಾಶನಲ್ ಜರ್ನಲ್ ಆಪ್ ಅರೋಮಾಥೆರಪಿ ಇಂಟರ್‌ನ್ಯಾಶನಲ್ ಜರ್ನಲ್ ಆಪ್ ಕ್ಲಿನಿಕಲ್ ಅರೋಮಾಥೆರಪಿ 2010-11-27 ವೇಬ್ಯಾಕ್ ಮೆಷಿನ್ ನಲ್ಲಿ. ಟೀಕೆಗಳು ಅರೋಮಾಥೆರಪಿ - ಡಸ್ ಇಟ್ ವರ್ಕ್? ಸ್ಮೆಲ್‌ ರೀಸರ್ಚ್ ಬಾಯ್ ಟಿಮ್ ಜಾಕೊಬ್ ಅರೋಮಾಥೆರಪಿ: ಮೇಕಿಂಗ್ ಡಾಲರ್ಸ್ ಔಟ್ ಆಪ್ ಸೆಂಟ್ಸ್